ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಫೋಟೋಗ್ರಾಫಿ ಕ್ಲಬ್ ಉದ್ಘಾಟನೆ

ಶಿರ್ವ: ಇಲ್ಲಿನ ಸಂತ ಮೇರಿ ಕಾಲೇಜಿನ ಐಕ್ಯುಎಸಿ ಸಹಯೋಗದೊಂದಿಗೆ ನಡೆದ ಫೋಟೋಗ್ರಾಫಿ ಕ್ಲಬ್‌ನ ಉದ್ಘಾಟನಾ ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಪರ್ಸ್ ಎಸೋಸಿಯೆಶನ್ ಕಾಪು ವಲಯದ ಅಧ್ಯಕ್ಷರಾದ ವಿನೋದ್ ಕಾಂಚನ್ ಇವರು ನೆರವೇರಿಸಿದರು. ಫೋಟೋಗ್ರಾಫಿ ಎನ್ನುವುದು ಒಂದು ಸೃಜನಾತ್ಮಕ ಕಲೆ, ಇಂದಿನ ಯುವ ಪೀಡಿಗೆ ಈ ಕಲೆಯನ್ನು ಒಂದು ವ್ಯವಸ್ಥಿತ ರೂಪದಲ್ಲಿ ಕಲಿತು ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್ ಇವರು ಫೋಟೋಗ್ರಾಫಿ ಕ್ಷೇತ್ರದಲ್ಲಿ ಈಗ ಸಾಕಷ್ಟು ಅವಕಾಶಗಳಿವೆ, […]