ನಂದಗೋಕುಲ ಕಾರ್ಯಾಗಾರ ಉದ್ಘಾಟನೆ; ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಪೂರಕ-ಸದಾಶಿವ ಶೆಟ್ಟಿ

ಉಡುಪಿ: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಪೂರಕ. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಕಲೆಯನ್ನು ಹೊರತಂದು ಕಲಾವಿದನಾಗಿ ರೂಪಿಸುವಲ್ಲಿ ಶಿಬಿರಗಳು ಸಹಕಾರಿಯಾಗಲಿವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿ ಹೇಳಿದರು. ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾ ತಂಡದ ಕಲಾವಿದರಗಾಗಿ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕೊಕ್ಕರ್ಣೆ ಸಮೀಪದ ಬಲ್ಲೆಬೈಲಿನಲ್ಲಿ ನಡೆದ ಮೂರುದಿನಗಳ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಉದ್ಯಾವರ, ತಂಡದ ವ್ಯವಸ್ಥಾಪಕ ಕಾರ್ತಿಕ್ ಬ್ರಹ್ಮಾವರ, ಬರಹಗಾರ್ತಿ ಲಿಖಿತಾ ಶೆಟ್ಟಿ, ವಿಶಾಲಾಕ್ಷಿ ರಾವ್, […]