ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಡಿಜಿಟೆಲ್ ವೇದಿಕೆ‌ ಉದ್ಘಾಟನೆ

ಮಣಿಪಾಲ: ಟೀಮ್ ಸಮ್ಯಕ್ ದಿಶಾ ವತಿಯಿಂದ ಡಿಜಿಟೆಲ್ ಮಾನಸಿಕ ಆರೋಗ್ಯ ಅನ್ನುವ ಪರಿಕಲ್ಪನೆಯಡಿಯಲ್ಲಿ its okay -ಮಾನಸಿಕ ಆರೋಗ್ಯವನ್ನು ಉತ್ತೇಜಿಸಿವ ನಿಟ್ಟಿನಲ್ಲಿ www.itsokay.support ವೇದಿಕೆಯ ಉದ್ಘಾಟನೆ ಅ.10 ರಂದು ನಡೆಯಿತು. ತರಂಗ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಮಣಿಪಾಲದ ಪ್ರಾಧ್ಯಾಪಕ, ಮಾನೋ ತಜ್ಞರಾದ ಶ್ರೀಪತಿ ಎಂ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮಾಹಿತಿ ನೀಡಿದರು.