ಯಕ್ಷಾಭಿನಯ ಬಳಗ: ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ಯಕ್ಷಾಭಿನಯ ಬಳಗ ಮಂಗಳೂರು ಇದರ ಮೂರನೇ ವರ್ಷದ ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರವು ಮಂಗಳೂರು ನಗರದ ಕಾಪಿಕಾಡಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಯಕ್ಷಗಾನ ಸಂಘಟಕ ಡಾ. ಮಂಟಪ ಮನೋಹರ ಉಪಾದ್ಯಾಯರು ದೀಪ ಪ್ರಜ್ವಲಿಸಿ ತರಗತಿಯನ್ನು ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಯಕ್ಷಶ್ರೀ ಐರೋಡಿ ಮಂಜುನಾಥ್ ಕುಲಾಲ್, ಸಂಘದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ದೇವು ಹನೆಹಳ್ಳಿ ಸತ್ಯನಾರಾಯಣ ರಾವ್ ಮತ್ತು ಶ್ರೀಮತಿ ಭಾಗ್ಯಪ್ರಕಾಶ್ ಉಡುಪ, ಕಾರ್ಯದರ್ಶಿ ಸಂತೋಷ್ […]