ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ: ಭುಗಿಲೆದ್ದ ಹಿಂಸಾಚಾರ; ಹಲವರಿಗೆ ಗಾಯ
ಕರಾಚಿ: ಮಂಗಳವಾರದಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಬಂಧಿಸಲಾಗಿದ್ದು, ಇದರ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲಾಯಿತು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರು ಅಲ್-ಖಾದಿರ್ ಟ್ರಸ್ಟ್ ಪ್ರಕರಣದ ವಿಚಾರಣೆಗೆ ಹಾಜರಾದ ಸಂದರ್ಭ ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಅವರನ್ನು ಬಂಧಿಸಲಾಯಿತು. ಮುಂದಿನ ಪ್ರಕ್ರಿಯೆಗಾಗಿ ಅವರನ್ನು ಇಂದು ಇಸ್ಲಾಮಾಬಾದ್‌ನ ಹೊಸ ಪೊಲೀಸ್ ಅತಿಥಿ ಗೃಹದಲ್ಲಿ ಹಾಜರುಪಡಿಸಲಾಗುತ್ತದೆ. ಪಾಕ್ ಮಾಜಿ ಪ್ರಧಾನಿಯನ್ನು ಫೆಡರಲ್ ಪ್ಯಾರಾಮಿಲಿಟರಿ ಕಾನೂನು ಜಾರಿ ಸಂಸ್ಥೆ ಪಾಕಿಸ್ತಾನ ರೇಂಜರ್ಸ್ […]
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ‍್ಯಾಲಿಯಲ್ಲಿ ಗುಂಡಿನ ದಾಳಿ: ಓರ್ವ ಮೃತ 9 ಮಂದಿ ಗಾಯಾಳು
ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಜೀರಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಶಂಕಿತನೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್ ಖಾನ್ ಮತ್ತು ಅವರ ಕೆಲವು ಬೆಂಬಲಿಗರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ನವೆಂಬರ್ 3ರಂದು ವಜೀರಾಬಾದ್ ನ ಝಫರ್ ಅಲಿ ಚೌಕ್ ನಲ್ಲಿ ‘ನೈಜ ಸ್ವಾತಂತ್ರ್ಯ’ ರ‍್ಯಾಲಿಯಲ್ಲಿ ಕಂಟೈನರ್ ಟ್ರಕ್ ನಲ್ಲಿ ಭಾಷಣ ಮಾಡುತ್ತಿದ್ದ ಇಮ್ರಾನ್ ಮೇಲೆ ಬುಲೆಟ್ ಶಾಟ್‌ಗಳನ್ನು ಹಾರಿಸಲಾಗಿದ್ದು, ಈ ಸಮಯದಲ್ಲಿ ಅವರ ಕಾಲಿಗೆ ಬುಲೆಟ್ […]