ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನಿಂದಾಗುವ ಆರೋಗ್ಯ ಪ್ರಯೋಜನಗಳು
ಆಡುಭಾಷೆಯಲ್ಲಿ ಮಜ್ಜಿಗೆ ಸೊಪ್ಪು ಎಂದು ಚಿರಪರಿಚಿತವಾಗಿರುವ ಹುಲ್ಲಿನ ಜಾತಿಯ ಈ ಸಸ್ಯದ ಎಲೆಗಳು ಮತ್ತು ಎಣ್ಣೆಯನ್ನು ಔಷಧವನ್ನು ತಯಾರಿಸಲು ಬಳಸಲಾಗುತ್ತದೆ. ಸಂಸ್ಕೃತದಲ್ಲಿ ತಕೃ ತೃಣ, ತುಳುವಿನಲ್ಲಿ ಅಲೆಪಂತಿ, ಕನ್ನಡದಲ್ಲಿ ಮಜ್ಜಿಗೆ ಸೊಪ್ಪು ಅಥವಾ ನಿಂಬೆ ಸೊಪ್ಪು ಮತ್ತು ಇಂಗೀಷ್ ನಲ್ಲಿ ಲೆಮನ್ ಗ್ರಾಸ್ ಎಂದು ಕರೆಯುತ್ತಾರೆ. ನಿಂಬೆಯ ಪರಿಮಳವನ್ನು ಸೂಸುವ ಮಜ್ಜಿಗೆ ಸೊಪ್ಪನ್ನು ಸಾಮಾನ್ಯವಾಗಿ ಮೌಖಿಕವಾಗಿ, ಚರ್ಮಕ್ಕೆ ನೇರವಾಗಿ ಅನ್ವಯಿಸಲಾಗುತ್ತದೆ ಅಥವಾ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಅಲ್ಲದೆ, ಡಿಯೋಡರೆಂಟ್ ಗಳು, ಸಾಬೂನುಗಳು ಮತ್ತು […]