ಕಾರ್ಕಳ ಆನೆಕೆರೆ ಜಾಗ ಒತ್ತುವರಿಗೊಳಿಸಿ ಅಕ್ರಮ ಕಟ್ಟಡ ನಿರ್ಮಾಣ:ಪುರಸಭಾ ಅಧ್ಯಕ್ಷೆಯ ಮೌನ, ಅಧ್ಯಕ್ಷೆಯ ನಡೆಗೆ ಆಕ್ರೋಶ!

ಕಾರ್ಕಳ: ಪುರಸಭೆ ವ್ಯಾಪ್ತಿಯ ಆನೆಕರೆ ಪಾಕ್೯ ಸಮೀಪದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಆನೆಕರೆ ಜಾಗವನ್ನು ಒತ್ತುವರಿಗೊಳಿಸಿ ರಾತ್ರೋ ರಾತ್ರಿ ಆಕ್ರಮ ಕಟ್ಟಡವೊಂದು ತಲೆ ಎತ್ತಿದೆ. ಈ ಬಗ್ಗೆ ಪುರಸಭಾ ಅಧ್ಯಕ್ಷೆ  ಹಾಗೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ‌ಕಾರಣವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕಾರ್ಕಳ ಶಾಸಕರ ನೇತೃತ್ವದಲ್ಲಿ ಲಕ್ಷ ಗಟ್ಟಲೆ ಹಣವನ್ನು ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿತ್ತು. ಇದೇ  ಸಂದರ್ಭದಲ್ಲಿ ಕೆರೆಯ ಸುತ್ತಲೂ ತಡೆಬೇಲಿಯನ್ನು ನಿರ್ಮಿಸಿ ಕೆರೆಯ ಸಂರಕ್ಷಣಾ ಕಾರ್ಯವನ್ನು ನಡೆಲಾಗಿತ್ತು.ಆದರೆ […]