ಜ.26 ರಿಂದ ಐಕಳ ಕಾಂತಾಬಾರೆ– ಬೂದಾಬಾರೆ ಕಂಬಳ್ಳೋತ್ಸವ

ಕಿನ್ನಿಗೋಳಿ: ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವ ಶನಿವಾರ ಬೆಳಿಗ್ಗೆ 11ಕ್ಕೆ ಐಕಳ ಮಂಜೊಟ್ಟಿ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅಂತರರಾಷ್ಟ್ರೀಯ ವಾಸ್ತು ಜೋತಿಷಿ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಲಿದ್ದು, ₹20 ಲಕ್ಷ ಅನುದಾನದ ಪ್ರೇಕ್ಷಕ ಗ್ಯಾಲರಿಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಭೂಮಿಪೂಜೆ ನೆರವೇರಿಸುವರು. ಕಂಬಳ ಕರೆಗಳನ್ನು ಯುಪಿಸಿಎಲ್‌ ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಉದ್ಘಾಟಿಸುವರು. ಐಕಳ ಬಾವ ಯಜಮಾನರಾದ ದೋಗಣ್ಣ ಸಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು. ಜನಪ್ರತಿನಿಧಿಗಳ ಸಹಿತ ಇತರ ಗಣ್ಯರು ಪಾಲ್ಗೊಳ್ಳುವರು. […]