ತನ್ನ ನಾಲ್ಕು ಮರಿಗಳ ಜೊತೆ ಸತ್ತ ಸಹೋದರಿಯ ಮೂರು ಮರಿಗಳನ್ನೂ ಸಾಕುತ್ತಿರುವ ಹುಲಿಯಮ್ಮ: ಕಾನನದಲ್ಲೊಂದು ಅಪರೂಪದ ಬಂಧನ!
ಸಾಮಾನ್ಯವಾಗಿ ಪ್ರಾಣಿಗಳು ಮನುಷ್ಯರಂತೆ ಕುಟುಂಬ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಮನುಷ್ಯನಂತೆ ಪ್ರಾಣಿಗಳಿಗೆ ಸಂಸಾರದ ಬಂಧನವಿಲ್ಲ. ಪ್ರಾಣಿ ಪ್ರಪಂಚದಲ್ಲಿ ಮಕ್ಕಳ ಲಾಲನೆ ಪಾಲನೆ ಎಲ್ಲವೂ ಹೆತ್ತಮ್ಮನದ್ದೇ ಆಗಿರುತ್ತದೆ. ಮರಿಯು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೂ ಅದರ ರಕ್ಷಣೆಯ ಜವಾಬ್ದಾರಿ ಹೊರುವ ತಾಯಿ, ಮರಿ ಸ್ವಾವಲಂಬಿ ಆದ ತಕ್ಷಣ ಅದನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತದೆ. ಒಂದು ವೇಳೆ ತಾಯಿ ಸತ್ತು ಹೋಯಿತೆಂದರೆ ಆ ಮರಿಯ ಜವಾಬ್ದಾರಿ ಅದರದ್ದೇ ಆಗಿರುತ್ತದೆ. ಆದರೆ, ಕಾಡಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಇಲ್ಲಿ ತನ್ನ […]