ಸಮುದ್ರದೊಳಗಿನ ಈ ವಿಶೇಷ ಖನಿಜದಿಂದ ಭೂಗ್ರಹದ ಮೇಲೆ ಇಂಗಾಲದ ಪ್ರಮಾಣ ಇಳಿಕೆ? ಭೂಮಿಯನ್ನು ತಂಪಾಗಿಸುವ ಆ ಖನಿಜ ಯಾವುದು?

ನ್ಯೂಯಾರ್ಕ್: ಕೇಂಬ್ರಿಡ್ಜ್ ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಭೂವಿಜ್ಞಾನಿಗಳು “ಸ್ಮೆಕ್ಟೈಟ್” ಎಂದು ಕರೆಯಲ್ಪಡುವ ವಿಶೇಷ ರೂಪದ ಮಣ್ಣಿನ ಖನಿಜವನ್ನು ಗುರುತಿಸಿದ್ದಾರೆ. ಇದು ಲಕ್ಷಾಂತರ ವರ್ಷಗಳಿಂದ ಇಂಗಾಲವನ್ನು ಸೆರೆಹಿಡಿಯುವ ಮತ್ತು ಸಂಗ್ರಹಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಮತ್ತಿದು ನಮ್ಮ ಭೂಗ್ರಹವನ್ನು ತಂಪಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಮುದ್ರದ ತಳದ ಸಂಕೀರ್ಣ ಪದರಗಳಲ್ಲಿ ಕಂಡುಬರುವ, ಸ್ಮೆಕ್ಟೈಟ್‌ನ ಸಮರೂಪ ತರಹದ ರಚನೆಯು ಸಾವಯವ ಇಂಗಾಲವನ್ನು ಹಿಡಿದಿಡುವಲ್ಲಿ ಪ್ರವೀಣವಾಗಿದೆ. ಈ ಪ್ರಕ್ರಿಯೆಯು ಭೂತಟ್ಟೆಗಳ ಚಲನೆಯ ಉದಯದಿಂದಲೂ […]