ಆಯಶಸ್ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಸೇರಿದ ಮೋಯಿನ್​ ಅಲಿ: ನಿವೃತ್ತಿ ವಾಪಸ್

ಲಂಡನ್: 2021ರಲ್ಲಿ ನಿವೃತ್ತಿ ಘೋಷಿಸಿದ್ದ 35 ವರ್ಷದ ಮೋಯಿನ್​ ಅಲಿ ಅವರನ್ನು ಆಯಶಸ್​ ಸರಣಿಗೆ ಇಂಗ್ಲೆಂಡ್​ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್​ – ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಸರಣಿ ಆಯಶಸ್​ನ ಮೊದಲೆರಡು ಪಂದ್ಯಗಳಿಗೆ ಮೋಯಿನ್​ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. 35 ವರ್ಷ ವಯಸ್ಸಿನ ಅನುಭವಿ ಸ್ಪಿನ್ನರ್​ 2021ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇಂಗ್ಲೆಂಡ್​ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಮತ್ತೆ ಅಲಿಗೆ ಮಣೆ ಹಾಕಲಾಗಿದೆ. ಆಸ್ಟ್ರೇಲಿಯಾ- ಭಾರತ ತಂಡಗಳ ನಡುವೆ ಲಂಡನ್‌ನ ಓವಲ್​ ಮೈದಾನದಲ್ಲಿ […]