100 ಮೀ ಸ್ಪ್ರಿಂಟ್ ರನ್ ಚಾಂಪಿಯನ್ ಶಿಪ್: ಮೋಕ್ಷಿತ್ ಯು.ಕೆ ಪ್ರಥಮ

ಹೈದರಾಬಾದ್: ಇಲ್ಲಿನ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಮಾರ್ಚ್ 19 ರಂದು ಆಯೋಜಿಸಲಾಗಿದ್ದ 100 ಮೀ ಸ್ಪ್ರಿಂಟ್ ರನ್ ಚಾಂಪಿಯನ್ ಶಿಪ್-2023 ನಲ್ಲಿ ಉಡುಪಿಯ ಮೋಕ್ಷಿತ್ ಯು.ಕೆ 8 ವರ್ಷ ಕೆಳಗಿನ ವಯಸ್ಸಿನ ಗುಂಪಿನ 60 ಮೀ ರೇಸ್ ಅನ್ನು 9.60 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಪ್ರಥಮಸ್ಥಾನವನ್ನು ಪಡೆದಿದ್ದಾನೆ. ಈತ ಉಮೇಶ್ ಕಪ್ಪೆಟ್ಟು ಮತ್ತು ಅಕ್ಷಯಾ ಶೆಟ್ಟಿ ದಂಪತಿಯ ಪುತ್ರ. ಅಂಬಲಪಾಡಿ ಕಿದಿಯೂರು ವಿದ್ಯಾಸಮುದ್ರತೀರ್ಥ ಆಂಗ್ಲ ಮಾಧ್ಯಮ ಶಾಲೆಯ 2 ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ ಖೇಲೋ […]

ಐಟಿ ಬಿಟಿ ಕಂಪನಿಗಳಿಗಿಂತಲೂ ಶ್ರೀಮಂತ ತಿರುಮತಿ ತಿಮ್ಮಪ್ಪ: ದೇವಸ್ಥಾನದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂಪಾಯಿಗಳು

ಹೈದರಾಬಾದ್: ತಿರುಪತಿಯ ಜಗತ್ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯ ರೂ 2.5 ಲಕ್ಷ ಕೋಟಿ (ಸುಮಾರು 30 ಶತಕೋಟಿ ಡಾಲರ್) ಯಾಗಿದ್ದು ಇದು ದೇಶದ ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ಒ.ಎನ್.ಜಿ.ಸಿ ಮತ್ತು ಐಒಸಿ ಅಂತಹ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ. 1933 ರಲ್ಲಿ ಸ್ಥಾಪನೆಯಾದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ಟ್ರಸ್ಟ್ ಇದೇ ಮೊದಲ ಬಾರಿಗೆ ತಿರುಪತಿಯ ಪ್ರಧಾನ ದೇವರ […]