ತೆಲುಗಿನ ಜನಪ್ರಿಯ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್ ಆಲಿಯಾಸ್ ಗದ್ದರ್ ನಿಧನ
ಹೈದರಾಬಾದ್ (ತೆಲಂಗಾಣ): ಹೃದಯ ಸಂಬಂಧಿ ಖಾಯಿಲೆಗೆ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ವಿಮಲಾ ಹಾಗು ಮಕ್ಕಳಾದ ಸೂರ್ಯ, ಚಂದ್ರ ಹಾಗೂ ವೆನ್ನೆಲ ಅವರನ್ನು ಅಗಲಿದ್ದಾರೆ. ತೆಲುಗಿನ ಕ್ರಾಂತಿಕಾರಿ ಗಾಯಕರೆಂದೇ ಪ್ರಸಿದ್ಧಿ ಪಡೆದಿದ್ದ ಗದ್ದರ್ (74) ಇಂದು ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತೆಲುಗಿನ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್ ಆಲಿಯಾಸ್ ಗದ್ದರ್ ಅವರು ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ‘ಗದ್ದರ್’ ಆಲ್ಬಂ: 1969ರ ತೆಲಂಗಾಣ ಚಳವಳಿಯಲ್ಲಿ ಸಕ್ರಿಯರಾಗಿದ್ದ ಗದ್ದರ್, ಪ್ರತ್ಯೇಕ ತೆಲಂಗಾಣ ರಾಜ್ಯ […]