ಕಟ್ಟಿಗೆಯ ತುಂಡಿನಿಂದ ಹೊಡೆದು ಪತ್ನಿಯನ್ನು ಕೊಲೆಗೈದ ಪತಿ

ಬೆಳ್ತಂಗಡಿ: ಪತಿಯೇ ತನ್ನ ಪತ್ನಿಯ ತಲೆಗೆ ಕಟ್ಟಿಗೆಯ ತುಂಡಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಸಮೀಪ ಗುರುವಾರ ರಾತ್ರಿ ನಡೆದಿದೆ. ಆರೋಪಿ ಪತಿಯನ್ನು ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಜಾನ್ಸನ್(47)‌ ಎಂದು ಗುರುತಿಸಲಾಗಿದೆ. ಈತನ ಪತ್ನಿ ಸೌಮ್ಯಾ ಫ್ರಾನ್ಸಿಸ್(40)‌ ಕೊಲೆಯಾದ ಮಹಿಳೆ. ಪತಿ ಪ್ರತಿದಿನ ಕುಡಿದು ಬಂದು ಪತ್ನಿಯ ಜತೆಗೆ ಜಗಳವಾಡುತ್ತಿದ್ದ. ಆದರೆ ಗುರುವಾರ ಜಗಳ ವಿಕೋಪಕ್ಕೆ ತಿರುಗಿದ್ದು, ಜಾನ್ಸನ್‌ ಕುಡಿದ ಮತ್ತಿನಲ್ಲಿ ಕಟ್ಟಿಗೆಯ ತುಂಡಿನಿಂದ ಸೌಮ್ಯಳಿಗೆ ಮಾರಣಾಂತಿಕವಾಗಿ ಹಲ್ಲೆ […]