ಮಂಗಳೂರು: ಬಾವಿಯಲ್ಲಿ ಪತ್ತೆಯಾಯ್ತು ಹುಲಿವೇಷಧಾರಿಯ ಮೃತದೇಹ
ಮಂಗಳೂರು: ನಗರದ ಹುಲಿವೇಷಧಾರಿಯೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಕುಂಪಲ ವಿದ್ಯಾನಗರದ ಬಾವಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಗರೋಡಿ ನಿವಾಸಿ ವಸಂತ್ ಕುಮಾರ್ (57) ಅವರ ಮೃತ ದೇಹ ಪತ್ತೆಯಾಗಿದ್ದು, ಇವರು ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೊಸರುಕುಡಿಕೆ ಉತ್ಸವಕ್ಕಾಗಿ ವಸಂತ್ ಹುಲಿವೇಷ ಹಾಕಿದ್ದರು. ಶುಕ್ರವಾರ ರಾತ್ರಿ 2 ಗಂಟೆಗೆ ವಸಂತ್ ಸಮೀಪದಲ್ಲಿದ್ದ ಸಂಬಂಧಿಕರ ಮನೆಯ ಸಮೀಪದ ಬಾವಿಯ ಕಟ್ಟೆ ಬಳಿ ಕುಳಿತುಕೊಂಡಿದ್ದರು. ಇದೇ ವೇಳೆ ನಿದ್ದೆಯ ಮಂಪರಿನಲ್ಲಿ ಅವರು ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ. ಶನಿವಾರ […]