ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಬೃಹತ್ ಸರಕು ಸಾಗಣೆ ಹಡಗು: ಹಡಗಿನಲ್ಲಿದ್ದ 25 ಭಾರತೀಯ ಸಿಬ್ಬಂದಿ ಸುರಕ್ಷಿತ

ಈಜಿಪ್ಟ್: ಇಲ್ಲಿನ ಸುಯೆಜ್ ಕಾಲುವೆಯಲ್ಲಿ ಜಪಾನ್ ಮೂಲದ ಬೃಹತ್ ಸರಕು ಸಾಗಣೆ ‘ಎವರ್ ಗಿವನ್’ ಹಡಗೊಂದು ಸಿಲುಕಿದ್ದು, ಹಡಗಿನಲ್ಲಿರುವ ಎಲ್ಲ 25 ಸಿಬ್ಬಂದಿ ಭಾರತೀಯರು ಎಂದು ತಿಳಿದುಬಂದಿದೆ. ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಯತ್ನಿಸಲಾಗುತ್ತಿದೆ ಎಂದು ಎವರ್ ಗಿವನ್ ಹಡಗಿನ ಮಾಲೀಕರು ಹೇಳಿದ್ದಾರೆ. ಹಡಗು ಸುಮಾರು 1,300 ಅಡಿ ಉದ್ದ ಮತ್ತು 2,00,000 ಮೆಟ್ರಿಕ್ ಟನ್ ಭಾರ ಹೊಂದಿದೆ. ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು […]