ಹುಡುಗರ ಜೊತೆ ಸೇರೋಕೆ ಏನೋ ಒಂಥರಾ ಅನ್ನಿಸಿದ ಆ ಕ್ಷಣ:ಹುಡುಗಿಯೊಬ್ಬಳ ಪಿಸುಮಾತು

ನನ್ನ ತಂಗಿ‌ ಹೈಸ್ಕೂಲ್ ಓದ್ತಾಳೆ. ಮೊನ್ನೆ ರೂಮಲ್ಲಿ ಕೂತ್ಕೊಂಡು ಏನೋ ಮಾಡ್ತಿದ್ಲು. ಅಮ್ಮ ಒಂದು ಸಣ್ಣ ಕೆಲಸ‌, ಅಂದ್ರೆ ಯಾವುದೋ ಒಂದು ವಸ್ತುವನ್ನು ತಂದುಕೊಡಲು ಹೇಳಿದಳು. ಇವಳು “ಹುಂ” ಎಂದವಳು ಐದು ನಿಮಿಷವಾದರೂ ಅಮ್ಮ ಹೇಳಿದ ಕೆಲಸ‌ ಮಾಡ್ಲಿಲ್ಲ, ಅಮ್ಮ ಮತ್ತೊಮ್ಮೆ “ತಂದುಕೊಡ್ತೀಯಾ” ಎಂದಳಷ್ಟೇ. ಇವಳಿಗೆ ಎಲ್ಲಿತ್ತೋ ಸಿಟ್ಟು ಗೊತ್ತಿಲ್ಲ, ಅಮ್ಮನ ಮೇಲೆ ರೇಗಾಡತೊಡಗಿದಳು. “ಎಲ್ಲಾ‌ ಕೆಲಸನೂ‌ ನಂಗೇ ಹೇಳ್ತೀಯಾ, ಅಕ್ಕಗೆ ಏನೂ ಹೇಳಲ್ಲ. ಮಾಡದು ಚೂರು ಲೇಟಾದ್ರೂ ಬೈತೀಯಾ ಅನ್ನುವಲ್ಲಿಂದ ಪ್ರಾರಂಭವಾದ ಸಿಟ್ಟು ನನ್ನನ್ನ ಕಂಡ್ರೆ […]