Tag: #hudugi #pisumatugalu #udupixpress #new #column #every #friday
-
ತುಂಬು ಹರೆಯದ ಹುಡುಗಿ ನಾನು: ಪ್ರತೀ ವಾರ ನನ್ನ ಕತೆ ಹೇಳ್ತೇನೆ: ಹೊಸ ಅಂಕಣ “ಹುಡುಗಿಯೊಬ್ಬಳ ಪಿಸುಮಾತು”
ನಾನೊಬ್ಬಳು ಹುಡುಗಿ. ಅಷ್ಟೇನೂ ಬಿಳುಪೂ ಅಲ್ಲದ, ಕಪ್ಪೂ ಇಲ್ಲದ ಸಾಧಾರಣ ರೂಪಿನ, ಸ್ವಲ್ಪ ದಪ್ಪ ಮೈಕಟ್ಟಿನ ಹರೆಯದ ಹುಡುಗಿ. ನಾನು ಹುಟ್ಟಿದಾಗ ಚೊಚ್ಚಲ ಹೆರಿಗೆ ನನ್ನಮ್ಮನಿಗೆ. ಎಲ್ಲರೂ ಸೇರಿ ಸಿಹಿ ಹಂಚಿ ಸಂಭ್ರಮಿಸಿದ್ದರಂತೆ. ನನ್ನ ನಸು ನಗು, ಮೊದಮೊದಲ ತೊದಲು ಮಾತು, ಎದ್ದು-ಬಿದ್ದು ಪುಟು ಪುಟು ನಡೆಯೋ ನನ್ನಂದ ಎಲ್ಲರ ದೃಷ್ಟಿ ಬೀಳುವಂತಿತ್ತಂತೆ. ಗೊಂಬೆಯಂತಿದ್ದ ನನ್ನ ಬಾಲ್ಯದ ಪ್ರತಿ ಕ್ಷಣಗಳನ್ನೂ ನನ್ನಪ್ಪ- ಅಮ್ಮ, ಅಜ್ಜ- ಅಜ್ಜಿ ಅವರ ಬಾಲ್ಯದಂತೆಯೇ ಅಚ್ಚರಿಯಿಂದ ಸಂಭ್ರಮಿಸಿದ್ದರಂತೆ. ನನ್ನ ಬೇಕು-ಬೇಡಗಳಿಗೆ ಇಲ್ಲವೆನ್ನದೆ ಪ್ರೀತಿಯ…