ಉಡುಪಿ ಜಿಲ್ಲೆಗೆ 100 ಬೆಡ್‌ಗಳ ಇ.ಎಸ್.ಐ ಆಸ್ಪತ್ರೆ ಮಂಜೂರು: ಬಹುಕಾಲದ ಬೇಡಿಕೆ ನನಸಾಗಿದೆ ಎಂದ ಕುಯಿಲಾಡಿ
ಉಡುಪಿ: ಕೇಂದ್ರ ಸರಕಾರದಿಂದ ಉಡುಪಿ ಜಿಲ್ಲೆಗೆ 100 ಬೆಡ್ ಗಳ ಇ.ಎಸ್.ಐ ಆಸ್ಪತೆ ಮಂಜೂರಾಗಿದ್ದು, ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆ ನನಸಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹರ್ಷ ವ್ಯಕ್ತಪಡಿದ್ದಾರೆ. ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಹಾಗೂ ಉಡುಪಿ ಜಿಲ್ಲೆಗೆ ಆಸ್ಪತ್ರೆ ಮಂಜೂರು ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಯಶಸ್ವಿಯಾದ ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ […]
ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆ ಮೇಲ್ಛಾವಣಿ ಕುಸಿತ: ಮೂವರು ಕಾರ್ಮಿಕರು ಗಾಯಾಳು; ಒಬ್ಬನ ಸ್ಥಿತಿ ಗಂಭೀರ
ಬೆಂಗಳೂರು: ಮಂಗಳವಾರ ಬೆಳಗ್ಗೆ 6:30ರ ಸುಮಾರಿಗೆ ನೃಪತುಂಗ ರಸ್ತೆಯಲ್ಲಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಪೋರ್ಟಿಕೋದ ಮೇಲ್ಛಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನೊಬ್ಬನ ಸ್ಥಿತಿ ಗಂಭೀರವಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆತನ ಜೊತೆ ಕೆಲಸ ಮಾಡುತ್ತಿದ್ದ ಮೂವರು ಸಹೋದ್ಯೋಗಿಗಳಿಗೆ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಆಸ್ಪತ್ರೆಯ ವೆಂಟಿಲೇಟರ್ ನಲ್ಲಿ ನಿಗಾವಣೆಯಲ್ಲಿರಿಸಿದ್ದು, ಇತರ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೋರ್ಟಿಕೋದ ನಿರ್ಮಾಣವು ಎರಡು ತಿಂಗಳ ಹಿಂದೆ ಪ್ರಾರಂಭವಾಗಿತ್ತು ಮತ್ತು ಇದು ಒಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಸೇಂಟ್ ಮಾರ್ಥಾಸ್ […]
ಬೆಳ್ಮಣ್ ಉಚಿತ ವೈದ್ಯಕೀಯ ಶಿಬಿರ.. ಆರೋಗ್ಯವಂತ ಜನತೆ ದೇಶದ ಸಂಪತ್ತು- ಸುನಿಲ್ ಕುಮಾರ್
ಕಾರ್ಕಳ: ಇನ್ನಾ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ, ಲಯನ್ಸ್ ಕ್ಲಬ್ ಬೆಳ್ಮಣ್ ಆಶ್ರಯ ದಲ್ಲಿ ಉಚಿತ ವೈದ್ಯಕೀಯ ಶಿಬಿರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆಯಿತು. ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯೆಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, ಆರೋಗ್ಯ ವಂತ ಜನತೆ ದೇಶದ ನಿಜವಾದ ಸಂಪತ್ತು. ಅದನ್ನು ರಕ್ಷಿಸುವಲ್ಲಿ ಸರಕಾರದ ಜೊತೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಜನರ ಆರೋಗ್ಯವನ್ನು ರಕ್ಷಿಸುವ […]