ವಿದ್ಯಾರ್ಥಿನಿ ನಿಖಿತ ಸಾವಿನ ಬಗ್ಗೆ ಆಸ್ಪತ್ರೆಯವರು ದಿಕ್ಕು ತಪ್ಪಿಸಿದ್ದಾರೆ: ಸಂತೋಷ್ ಕುಲಾಲ್ ಪಕ್ಕಾಲು ಆರೋಪ
ಉಡುಪಿ: ವಿದ್ಯಾರ್ಥಿನಿ ನಿಖಿತ ಸಾವಿನ ಘಟನೆ ನೋವಿನ ಸಂಗತಿ. ಕುಟುಂಬಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಆಸ್ಪತ್ರೆಯವರು ಸರಿಯಾದ ಸ್ಪಷ್ಟೀಕರಣ ನೀಡಿಲ್ಲ. ಈಗಾಗಲೇ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ. ವಿದ್ಯಾರ್ಥಿನಿ ಮೃತಪಟ್ಟ ಬಳಿಕ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಅದೊಂದು ಗೊಂದಲ ಇನ್ನೂ ಕೂಡ ಕಾಡುತಿದೆ ಎಂದು ಕುಂಬಾರರ ಗುಡಿಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು ಹೇಳಿದರು. ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕುಲಾಲ ಸಂಘದ ವತಿಯಿಂದ […]