ಹೊಸಬೆಳಕು ಆಶ್ರಮದ ನೂತನ ಕಟ್ಟಡದ ವಿದ್ಯುತ್ ಸಂಪರ್ಕಕ್ಕೆ ಚಾಲನೆ

ಬೈಲೂರು: ಕೌಡೂರಿನಲ್ಲಿ ಹೊಸಬೆಳಕು ಆಶ್ರಮದ ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ಕೊಳವೆ ಬಾವಿಗೆ ಪಂಪ್ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಂಸ್ಥೆಯ ಗೌರವಾಧ್ಯಕ್ಷ ಉಡುಪಿ ಯು. ವಿಶ್ವನಾಥ ಶೆಣೈ ಚಾಲನೆ ನೀಡಿದರು. ಸಮಾಜ ಸೇವಕರಾದ ರವೀಂದ್ರ ನಾಯಕ್ ಹಾಗೂ ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕ ವಿನಯಚಂದ್ರ, ತನುಲಾ ತರುಣ್, ಜಯರಾಮ್ ಪಾಟ್ಕರ್, ದೇವದಾಸ ಕಾಮತ್ ಹಾಗೂ ಹೊಸಬೆಳಕು ಸಂಸ್ಥೆಯ ನಿವಾಸಿಗಳು ಉಪಸ್ಥಿತರಿದ್ದರು.