ಭೀಕರ ಅಪಘಾತ: ಕುಂದಾಪುರ ಮೂಲದ ಒಂದೇ ಕುಟುಂಬದ ಮೂವರು ಸಾವು

ಉಡುಪಿ: ಭೀಕರ ಅಪಘಾತವೊಂದರಲ್ಲಿ ಐದು ವರ್ಷದ ಬಾಲಕಿ ಸಹಿತ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರದಲ್ಲಿ ಅಪಘಾತ ಸಂಭವಿಸಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಕುಂದಾಪುರ ಮೂಲದ 32 ವರ್ಷದ ಗೀತಾ, 60ವರ್ಷದ ಶಾರದಾ ಮತ್ತು 5 ವರ್ಷದ ಬಾಲಕಿ ಧೃತಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಗೇಶ (65), ದಯಾನಂದ (66), ಸುಧೀಂದ್ರ […]