ಶ್ರೀ ಕೃಷ್ಣ ಮಠದ ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಹಿನ್ನೆಲೆ, ಜೋಡುಕಟ್ಟೆಯಿಂದ ಅದ್ದೂರಿ ಮೆರವಣಿಗೆ ಮೂಲಕ ಹೊರಕಾಣಿಕೆ ಸಮರ್ಪಣೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವ ಮತ್ತು ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಹಸಿರು ಹೊರೆ ಕಾಣಿಕೆ ಸಮರ್ಪಣೆ ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ನಡೆಯಿತು. ಕೆಎಂ ಮಾರ್ಗ, ಸಂಸ್ಕೃತ ಕಾಲೇಜು ರಸ್ತೆಯಿಂದ ಮೆರವಣಿಗೆ ಮೂಲಕ ಮೆರವಣಿಗೆ ಸಾಗಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಹೊರೆಕಾಣಿಕೆ ನೀಡಿದ್ದು, ಮಂಗಳೂರು, ಸುರತ್ಕಲ್, ನೀಲಾವರ, ಬೈಕಾಡಿ, ಬ್ರಹ್ಮಾವರ ಸೇರಿದಂತೆ […]