ಕಣಜದ ಹುಳು ಕಡಿದು ಗೃಹರಕ್ಷಕ ದಳ ಸಿಬ್ಬಂದಿ ಮೃತ್ಯು
ಮೂಲ್ಕಿ: ಕಣಜದ ಹುಳು ಕಡಿದು ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಶ್ರೀರಾಮ ಮಂದಿರ ಬಳಿ ನಡೆದಿದೆ. ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತ ದುರ್ದೈವಿ. ಅವರು ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿದ್ದರು. ಬುಧವಾರ ಸಂಜೆ ಶ್ರೀರಾಮ ಮಂದಿರ ಬಳಿ ಶಾಲಾ ಮಕ್ಕಳಿಗೆ ಕಣಜದ ಹುಳುಗಳು ದಾಳಿ ನಡೆಸಿತ್ತು. ಇದನ್ನು ನೋಡಿದ ಸಂತೋಷ್ ಅವರು, ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ […]