ಗೃಹರಕ್ಷಕ ಚೂಡಪ್ಪ ಸುವರ್ಣ ಕುಟುಂಬಕ್ಕೆ ಸಹಾಯಧನ

ಉಡುಪಿ: ಅನಾರೋಗ್ಯದಿಂದ ಮೃತಪಟ್ಟ ಜಿಲ್ಲಾ ಗೃಹರಕ್ಷಕ ದಳ ಬ್ರಹ್ಮಾವರ ಘಟಕದ ಗೃಹರಕ್ಷಕ ಚೂಡಪ್ಪ ಸುವರ್ಣ ಅವರ ಕುಟುಂಬಕ್ಕೆ ಜಿಲ್ಲಾ ಸಮಾದೇಷ್ಟ ಪ್ರಶಾಂತ್ ಶೆಟ್ಟಿ ಅವರು ಜಿಲ್ಲಾ ಗೃಹರಕ್ಷಕ ನಿಧಿಯಿಂದ 10,000 ರೂ. ಗಳ ಸಹಾಯಧನದ ಚೆಕ್ ಅನ್ನು ನೀಡಿದರು. ಈ ಸಂದರ್ಭದಲ್ಲಿ ಉಪಸಮಾದೇಷ್ಟ ರಮೇಶ್, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್, ಕಚೇರಿ ಅಧೀಕ್ಷಕ ರತ್ನಾಕರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಪುನರ್ ಮನನ ತರಬೇತಿ: ಗೃಹರಕ್ಷಕ ಸಂದೀಪ್ ದಾಸ್ ಪ್ರಥಮ

ಉಡುಪಿ: ಜಿಲ್ಲಾ ಗೃಹರಕ್ಷಕ ದಳದ ಕುಂದಾಪುರ ಘಟಕದ ಗೃಹರಕ್ಷಕ ಸಂದೀಪ್ ದಾಸ್ ಅವರು ಜೂನ್ 15 ರಿಂದ 27 ರ ವರೆಗೆ ದಾವಣಗೆರೆಯ ದೇವರಬೆಳಕೆರೆಯ ಗೃಹರಕ್ಷಕದಳ ಮತ್ತು ಪೌರ ರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರಿಗೆ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು: ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ಜಿಲ್ಲಾ ಗೃಹರಕ್ಷಕ ದಳದಿಂದ ಗೃಹರಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಾಹನ ಚಾಲನಾ ಪರವಾನಗಿ ಪಡೆದಿರುವ ಪುರುಷ ಅಭ್ಯರ್ಥಿಗಳಿಗೆ ಆದ್ಯತೆ ಇದೆ. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವ ಹಾಗೂ 19 ವರ್ಷದಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು ಇಲ್ಲಿ ಅರ್ಜಿ ಪಡೆದು, 2023ರ ಜೂನ್ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ: 0824-2220562ಗೆ ಕರೆ ಮಾಡುವಂತೆ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹರಕ್ಷಕರ ಅಧಿಕಾರಿಗಳ ತರಬೇತಿ: ಶ್ರೀಪ್ರಸಾದ್ ಅವರಿಗೆ ಬೆಳ್ಳಿಪದಕ

ಉಡುಪಿ: ಆಗಸ್ಟ್ 1 ರಿಂದ 29 ರ ವರೆಗೆ ರವರೆಗೆ ಬೆಂಗಳೂರಿನ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಗೃಹರಕ್ಷಕರ ಅಧಿಕಾರಿಗಳ ತರಬೇತಿಯಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಾರ್ಕಳ ಘಟಕದ ಗೃಹರಕ್ಷಕ ಶ್ರೀಪ್ರಸಾದ್ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರನ್ನು ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ ಗೃಹರಕ್ಷಕ ದಳ ಸಂಸ್ಥೆಯ ವತಿಯಿಂದ ಅಭಿನಂದಿಸಿರುತ್ತಾರೆ.