ಅಂಗವೈಕಲ್ಯದಿಂದ ಬಳಲುತ್ತಿರುವ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾಕಿರಣ: ಹತ್ತಿ ಬತ್ತಿ ತಯಾರಿಸಿ ಆತ್ಮನಿರ್ಭರತೆಯತ್ತ ಪಯಣ…
ಉಡುಪಿ: ಕಾರಣಾಂತರಗಳಿಂದ ಅಂಗವೈಕಲ್ಯ ಹೊಂದಿ ಇನ್ನೊಬ್ಬರ ಆಶ್ರಯದಲ್ಲಿ ಬದುಕುವಂತಾದಾಗ ಜೀವನವೇ ಬೇಡವೆಂದು ಆತ್ಮಹತ್ಯೆ ಮಾಡುವಂತಹ ಯೋಚನೆಗಳು ಬರುತ್ತವೆ. ಮನೆ ನಿಭಾಯಿಸಲು ತೆಗೆದುಕೊಂಡ ಸಾಲ, ಮಕ್ಕಳ ವಿದ್ಯಾಭ್ಯಾಸ, ಸಂಸಾರದ ಭಾರ ತೂಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರು ಹಲವರು. ಅಂಗವೈಕಲ್ಯವೇ ಒಂದು ಅಭಿಶಾಪವಾದಂತಹ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾ”ಕಿರಣ”ವಾಗಿ ಅವರ ಬೆಂಬಲಕ್ಕೆ ನಿಂತಿದೆ ಡಾ. ಶಶಿಕಿರಣ್ ಶೆಟ್ಟಿ ಅವರ ಹೋಂ ಡಾಕ್ಟರ್ ಫೌಂಡೇಶನ್. ಕಳೆದ ಹಲವಾರು ವರ್ಷಗಳಿಂದ ಅಶಕ್ತರು, ಅನಾಥರು, ಅಸಾಹಯಕರು, ಕುಟುಂಬದಿಂದ ಪರಿತ್ಯಕ್ತ ವೃದ್ದರು, ಶಾಲಾ ವಿದ್ಯಾರ್ಥಿಗಳು, ರೈತರು […]