ಹಾಲಿವುಡ್ ನಿರ್ದೇಶಕ , ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಫ್ರೈಡ್ಕಿನ್ ವಿಧಿವಶ
ವಿಲಿಯಂ ಫ್ರೈಡ್ಕಿನ್ ನಿರ್ದೇಶನದ ‘ದಿ ಕೇನ್ ಮ್ಯೂಟಿನಿ ಕೋರ್ಟ್ ಮಾರ್ಷಲ್’ ಚಿತ್ರದ ಪ್ರಥಮ ಪ್ರದರ್ಶನವನ್ನು ಆಯೋಜಿಸಲು ವೆನಿಸ್ ಚಲನಚಿತ್ರೋದ್ಯಮ ನಿರ್ಧರಿಸಿದೆ. ಈ ಚಿತ್ರದಲ್ಲಿ ಕೀಫರ್ ಸದರ್ಲ್ಯಾಂಡ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಫ್ರೈಡ್ಕಿನ್ ಅವರ ಕೊನೆಯ ಚಿತ್ರವಾಗಿದೆ. ವಿಲಿಯಂ ಫ್ರೈಡ್ಕಿನ್ ಅವರ ಪತ್ನಿ ಶೆರ್ರಿ ಲ್ಯಾನ್ಸಿಂಗ್ ಅವರ ಆಪ್ತ ಸ್ನೇಹಿತ, ಚಾಪ್ಮನ್ ವಿಶ್ಚವಿದ್ಯಾಲಯದ ಡೀನ್ ಸ್ಟೀಫನ್ ಗ್ಯಾಲೋವೆ ನಟನ ನಿಧನವನ್ನು ಧೃಢಪಡಿಸಿದ್ದಾರೆ. ಹಾಲಿವುಡ್ ನಿರ್ದೇಶಕ ವಿಲಿಯಂ ಫ್ರೈಡ್ಕಿನ್ ಸೋಮವಾರ ಲಾಸ್ ಏಂಜಲೀಸ್ನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. […]