ಹಿರಿಯಡಕ: ಎಂಕುಲ್ ಫ್ರೆಂಡ್ಸ್ ವತಿಯಿಂದ ಇಂಡಿಪೆಂಡೆನ್ಸ್ ಟ್ರೋಫಿ-2023; ಪಾನಡ್ಕ ತಂಡ ಪ್ರಥಮ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ (ರಿ) ಇವರ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಟ್ರೋಫಿ-2023 ಆ.15 ರಂದು ಹಿರಿಯಡ್ಕ ಕೋಟ್ನಕಟ್ಟೆಯಲ್ಲಿ ನಡೆಯಿತು. ಶಿವಕುಮಾರ್ ಕರ್ಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾಟದಲ್ಲಿ ಸುಮಾರು 24 ತಂಡಗಳು ಭಾಗವಹಿಸಿದ್ದವು. ಇಂಡಿಪೆಂಡೆನ್ಸ್ ಟ್ರೋಫಿ 2023 ರಲ್ಲಿ ಪಾನಡ್ಕ ತಂಡವು ವಿಜೇತರಾಗಿದ್ದು, ಕಾಂತರಗೋಳಿ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮುಖ್ಯ ಅತಿಥಿಗಳಾಗಿ ನವೀನ್ ಪೆರ್ಡೂರ್, ಮೋಹನ್ ಕಡಬ, ಸತ್ಯಪ್ರಸಾದ್, ದೇವದಾಸ ಮಾರಾಟೆ, ನಿತ್ಯಾನಂದ ಪೂಜಾರಿ, ಪರಮೇಶ್ವರ್, ಎಂಕುಲ್ ಫ್ರೆಂಡ್ಸ್ ತಂಡದ ಅಧ್ಯಕ್ಷ ರಮೇಶ್, ಕ್ರೀಡಾ ಕಾರ್ಯದರ್ಶಿ ಶಿಶಿರ್, […]

ಮಾಲೀಕರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು: 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಕಳವು

ಹಿರಿಯಡ್ಕ: ಇಲ್ಲಿನ ಓಂತಿಬೆಟ್ಟು ಶಾಲೆಯ ಸಮೀಪದ ನಿವಾಸಿ ಶಂಕರ ಟಿ ಎಂಬವರು ತಮ್ಮ ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿದ್ದು, ವಾಪಾಸು ಬರುವಷ್ಟರಲ್ಲಿ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನಗೈದ ಪ್ರಕರಣ ಸೋಮವಾರ ಮಧ್ಯಾಹ್ನ ನಡೆದಿದೆ. ಕಳ್ಳತನಗೈದ ಚಿನ್ನಾಭರಣದ ಒಟ್ಟು ತೂಕ 242 ಗ್ರಾಂ ಆಗಿದ್ದು ಮೌಲ್ಯ 8,50,000 ರೂ ಎಂದು ಅಂದಾಜಿಸಲಾಗಿದೆ. ಜೊತೆಗೆ 40 ಸಾವಿರ ರೂನ ಕ್ಯಾಮರಾ ಮತ್ತು 20 ಸಾವಿರ ನಗದು ಕಳ್ಳತನವಾಗಿದೆ. ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆ ಮಧ್ಯದ ಅವಧಿಯಲ್ಲಿ ಘಟನೆ […]

ಡಾ. ದೇವದಾಸ್ ಕಾಮತ್ ಅವರ ಅಭಿನಂದನಾ ಕಾರ್ಯಕ್ರಮ: ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಹಿರಿಯಡಕ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜು. 31 ರಂದು ನಡೆದ IMA-KSB DOCTORS DAY AWARD – 2023 ಪ್ರಶಸ್ತಿ ಪುರಸ್ಕೃತ ಡಾ. ದೇವದಾಸ್ ಕಾಮತ್ ಅವರ ಅಭಿನಂದನಾ ಸಮಾರಂಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಬಿ.ಎಲ್ ವಿಶ್ವಾಸ್ ಭಟ್, ಅಮೋಘ (ರಿ.) ಹಿರಿಯಡಕದ ನಿರ್ದೇಶಕಿ ಪೂರ್ಣಿಮಾ ಸುರೇಶ್, ಶಾಲಾ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಹಿರಿಯಡ್ಕ: ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮೋಹನ್ ದಾಸ್ ಆಚಾರ್ಯ ಆಯ್ಕೆ

ಹಿರಿಯಡ್ಕ: ಲಯನ್ಸ್ ಜಿಲ್ಲೆ 317C ವ್ಯಾಪ್ತಿಯ ಪ್ರತಿಷ್ಠಿತ ಹಿರಿಯಡ್ಕ ಕ್ಲಬ್ ನ ನೂತನ ಅಧ್ಯಕ್ಷರಾಗಿ ಲಯನ್ ಮೋಹನ್ ದಾಸ್ ಆಚಾರ್ಯ ಆಯ್ಕೆಯಾಗಿದ್ದಾರೆ. ಮೋಹನ್ ದಾಸ್ ಆಚಾರ್ಯ ಪ್ರಥಮ ಜಿಲ್ಲಾ ಗವರ್ನರ್ ಲಯನ್ ಮೊಹಮ್ಮದ್ ಹನೀಫ್ ಇವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯಡ್ಕದ ನಾರಾಯಣ ಗುರು ರಜತ ರಶ್ಮಿ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ರಘುವೀರ್ ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ವಸಂತ್ ಶೆಟ್ಟಿ ಅಧಿಕಾರ ವಹಿಸಿಕೊಂಡರು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ವರ್ವಾಡಿ ಪ್ರಸಾದ್ ಶೆಟ್ಟಿ, ಪ್ರಾಂತೀಯ […]

ಇಂದಿನಿಂದ ಮೇ. 10ರ ವರೆಗೆ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನ ಸಿರಿಜಾತ್ರಾ ಮಹೋತ್ಸವ

ಹಿರಿಯಡ್ಕ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಶ್ರೀ ಕ್ಷೇತ್ರ ಹಿರಿಯಡ್ಕ ಉಡುಪಿ ತಾಲೂಕು ಮತ್ತು ಜಿಲ್ಲೆ 576113. ಮೊಬೈಲ್ 9481440240 ಭಗವದ್ಭಕ್ತರೇ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮೇಷ ಮಾಸ ದಿನ 21 ಸಲುವ ವೈಶಾಖ ಮಾಸದ ಪೂರ್ಣಮಿ ತಾ.05-05-2023ನೇ ಶುಕ್ರವಾರ ಮೊದಲ್ಗೊಂಡು ವೈಶಾಖ ಬಹುಳ ಪಂಚಮಿ ತಾ. 10-05-2023ನೇ ಬುಧವಾರ ಪರ್ಯಂತ ಶ್ರೀ ಕ್ಷೇತ್ರ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಧ್ವಜಾರೋಹಣ ಮಹೋತ್ಸವಗಳು […]