ಹಿರಿಯಡ್ಕ: ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮೋಹನ್ ದಾಸ್ ಆಚಾರ್ಯ ಆಯ್ಕೆ

ಹಿರಿಯಡ್ಕ: ಲಯನ್ಸ್ ಜಿಲ್ಲೆ 317C ವ್ಯಾಪ್ತಿಯ ಪ್ರತಿಷ್ಠಿತ ಹಿರಿಯಡ್ಕ ಕ್ಲಬ್ ನ ನೂತನ ಅಧ್ಯಕ್ಷರಾಗಿ ಲಯನ್ ಮೋಹನ್ ದಾಸ್ ಆಚಾರ್ಯ ಆಯ್ಕೆಯಾಗಿದ್ದಾರೆ. ಮೋಹನ್ ದಾಸ್ ಆಚಾರ್ಯ ಪ್ರಥಮ ಜಿಲ್ಲಾ ಗವರ್ನರ್ ಲಯನ್ ಮೊಹಮ್ಮದ್ ಹನೀಫ್ ಇವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಹಿರಿಯಡ್ಕದ ನಾರಾಯಣ ಗುರು ರಜತ ರಶ್ಮಿ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ರಘುವೀರ್ ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ವಸಂತ್ ಶೆಟ್ಟಿ ಅಧಿಕಾರ ವಹಿಸಿಕೊಂಡರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ವರ್ವಾಡಿ ಪ್ರಸಾದ್ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ದಿನೇಶ್ ಕಿಣಿ, ನಿರ್ಗಮನ ಅಧ್ಯಕ್ಷ ರವೀಂದ್ರ ನಾಥ್ ಹೆಗ್ಡೆ, ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಗಂಗಾಧರ್ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.

ಸೇವಾ ಚಟುವಟಿಕೆಗಳ ಅಂಗವಾಗಿ ನೂತನ ಅಧ್ಯಕ್ಷ ಮೋಹದಾಸ್ ಆಚಾರ್ಯ ಇವರು ಹತ್ತನೇ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತ ರೋಗಿಗಳಿಗೆ ಔಷಧಿಗಾಗಿ ಸಹಾಯಧನ ಮತ್ತು ಬಡ ಕುಟುಂಬಗಳಿಗೆ ಮನೆ ರಿಪೇರಿಗಾಗಿ ಸಹಾಯಧನವನ್ನು ವಿತರಿಸಿದರು.

ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಗಿಯಿತು.