ಹಿರಿಯಡಕ: ಭಾರೀ ಗಾತ್ರದ ಹೆಬ್ಬಾವು, ನಾಗರಹಾವು ಪತ್ತೆ
ಹಿರಿಯಡಕ: ಹಿರಿಯಡಕ-ಉಡುಪಿ ರಸ್ತೆಯ, ಜಿಮ್ ಬಿಲ್ಡಿಂಗ್ ಬಳಿಯಲ್ಲಿ ಇರುವ ಪಾಳುಬಿದ್ದ ಮನೆಯೊಂದರಲ್ಲಿ ಭಾರೀ ಗಾತ್ರದ ಹೆಬ್ಬಾವು ಹಾಗೂ ನಾಗರಹಾವೊಂದು ಪತ್ತೆಯಾಗಿದೆ. ಶನಿವಾರ ರಾತ್ರಿ ಪಾಳುಬಿದ್ದ ಮನೆಯಲ್ಲಿ ಹಾವುಗಳು ಬುಸುಗುಡುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಮನೆಯೊಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಅಲ್ಲಿ ಹೆಬ್ಬಾವು ಹಾಗೂ ನಾಗರಹಾವು ಇರುವುದು ಕಾಣಿಸಿಕೊಂಡಿದೆ. ಸ್ಥಳೀಯರಾದ ತ್ಯಾಗರಾಜ್ ಮಾಣೈ ಹಾಗೂ ಇತರ ಸ್ಥಳೀಯ ಯುವಕರು ಸೇರಿಕೊಂಡು ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಡಿದ ಹಾವುಗಳನ್ನು ಗೋಣಿಚೀಲವೊಂದರಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.