ಹಿರಿಯಡಕ: ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ

ಉಡುಪಿ, ಫೆ. 20: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ ಆಶ್ರಯದಲ್ಲಿ ಅಮೋಘ(ರಿ.), ಹಿರಿಯಡಕ ಇವರ ಸಹಯೋಗದೊಂದಿಗೆ ಗುರುವಾರ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಇವರು ತುಳುನಾಡಿನ ಸಂಸ್ಕೃತಿಯ ಶ್ರೇಷ್ಠ ಮೌಲ್ಯಗಳನ್ನು ಸಾರುವ ಸಿರಿಕಥಾನಕದ ಮಹತ್ವದ ಕುರಿತು ಮಾತನಾಡುತ್ತಾ ‘ಮಾತೃಭಾಷೆ ಮತ್ತು ಸಂಸ್ಕೃತಿಯ ಅರಿವಿನ ಔಚಿತ್ಯ’ದ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಅಮೋಘ (ರಿ.) ಹಿರಿಯಡಕ ಇದರ […]