ಹಿರ್ಗಾನದಲ್ಲಿ ಮತ್ತೊಂದು ಮಂಗ ನಿಗೂಢ ಸಾವು, ಹೆಚ್ಚಿದ ಮಂಗನ ಕಾಯಿಲೆ ಭೀತಿ

ಕುಂದಾಪುರ: ಜಿಲ್ಲೆಯ ಗಡಿಭಾಗ ಬೈಂದೂರು ಸಮೀಪದ ಶಿರೂರಿನಲ್ಲಿ ೨ ಮಂಗಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ನಿಗೂಢ ಸಾವಿನ ಸುದ್ದಿಯ ಬೆನ್ನಲ್ಲೇ ಇದೀಗ ೨ ಮಂಗಗಳು ನಿಗೂಢವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಮಾದರಿ: ಶಿರೂರಿನಲ್ಲಿ ಸಾವನ್ನಪ್ಪಿರುವ ಒಂದು ಮಂಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೊಂದು ಮಂಗ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಈಗಾಗಲೆ ಹೊಸಂಗಡಿಯಲ್ಲಿ ೨, ಸಿದ್ಧಾಪುರದಲ್ಲಿ ೧, ಕಾರ್ಕಳ ಹಿರ್ಗಾನದಲ್ಲಿ ೧ ಮಂಗ ಮೃತಪಟ್ಟಿದ್ದು ಸಾವಿನ ಸಂಖ್ಯೆ ಒಟ್ಟು […]