ನಾಗಸಾಧುಗಳಿಗೆ ಅವಮಾನ ಉಡುಪಿಯಲ್ಲಿ ‘ಲಾಲ್ ಕಪ್ತಾನ್’ ಸಿನಿಮಾ ನಿಷೇಧಕ್ಕೆ ಆಗ್ರಹ
ಉಡುಪಿ: ಹಿಂದಿ ಭಾಷೆಯ ‘ಲಾಲ್ ಕಪ್ತಾನ್’ ಸಿನಿಮಾದಲ್ಲಿ ನಾಗ ಸಾಧುಗಳನ್ನು ಅವಮಾನ ಮಾಡಲಾಗಿದ್ದು, ಇದರಿಂದ ಹಿಂದು ಧಾರ್ಮಿಕ ಭಾವನೆಗೆ ದಕ್ಕೆಯಾಗುತ್ತದೆ. ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ರಮೇಶ ಪೆಲತ್ತೂರು ಆಗ್ರಹಿಸಿದರು. ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಭಾನುವಾರ ಹಿಂದು ಜನಜಾಗೃತಿ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಚಲನಚಿತ್ರದಲ್ಲಿ ನಾಗಾ ಸಾಧುಗಳಿಗೆ ಸಂಬಂಧಪಟ್ಟ ಕೆಲವು ವಿಕೃತ ದೃಶ್ಯಗಳಿವೆ. ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ರಕ್ಷಣೆಗಾಗಿ ನಾಗಾಸಾಧುಗಳ ಸೇನೆ ನಿರ್ಮಿಸಿದ್ದರು. […]