ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ
ಉಡುಪಿ: ಸೋಮವಾರದಂದು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಇಂದು ಉಡುಪಿ ಅಜ್ಜರಕಾಡುವಿನಲ್ಲಿರುವ ಎಲ್.ಐ.ಸಿ ಕಚೇರಿ ಎದುರು ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ , ನಮ್ಮ ಹೋರಾಟ ಎಲ್‌ಐಸಿ ವಿರುದ್ಧ ಅಲ್ಲ. ಎಲ್.ಐ.ಸಿ ಗೆ ಆಗಿರುವ ಅನ್ಯಾಯಕ್ಕಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕೆಲವು ಮಂದಿ ಸೇರಿ ದೇಶದ ಬ್ಯಾಂಕ್ ಗಳನ್ನು ಲೂಟಿ ಮಾಡುತ್ತಿದ್ದಾರೆ. ದೇಶದ 12 ಕೋಟಿ […]