ಹೆಜಮಾಡಿ: ಇಬ್ಬರು ಮುಸ್ಲಿಂ ಯುವಕರ ಪ್ರಾಣರಕ್ಷಣೆಗೆ ಒಂದು ಕಿ.ಮೀ ದೂರದಿಂದ ಓಡಿಬಂದ ಹಿಂದೂ ಯುವಕರು

ಪಡುಬಿದ್ರಿ: ಹೆಜಮಾಡಿ ಕಾಮಿನಿ ಹೊಳೆಯಲ್ಲಿ ಮುಳುಗಿದ ಇಬ್ಬರು ಮುಸ್ಲಿಂ ಯುವಕರನ್ನು ಹಿಂದೂ ಯುವಕರು ಜೀವದ ಹಂಗು ತೊರೆದು ರಕ್ಷಿಸಲು ಮುಂದಾಗಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ದುರದೃಷ್ಟವಶಾತ್ ಇಬ್ಬರು ಮುಸ್ಲಿಂ ಯುವಕರ ದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದರೂ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ವಿಶ್ವ ಹಿಂದೂ ಪರಿಷತ್- ಬಜರಂಗದಳ ಕಾಪು ಪ್ರಖಂಡದ ಸಹಕಾರ್ಯದರ್ಶಿ ನಿತೇಶ್ ಮೊಗವೀರ ಎರ್ಮಾಳ್, ಪಡುಬಿದ್ರಿ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷ ಕಿರಣ್ ಮೊಗವೀರ ಪಡುಬಿದ್ರಿ ಮತ್ತು ರಂಜಿತ್ ಮೊಗವೀರ ಎರ್ಮಾಳ್ ಮುಸ್ಲಿಂ ಯುವಕರ ರಕ್ಷಣೆ […]