ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ನಾಪತ್ತೆ
ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ನಾಪತ್ತೆ ಆದ ಘಟನೆ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ಬಾಲಕಿಯನ್ನು ಐತ್ತೂರು ಗ್ರಾಮದ ಬೆತ್ತೋಡಿ ನಿವಾಸಿ ಜಗದೀಶ ಎಂಬವರ ಪುತ್ರಿ ನರ್ಮದಾ ಬಿ.ಜೆ (16) ಎಂದು ಗುರುತಿಸಲಾಗಿದೆ. ಈಕೆ ಮರ್ದಾಳದ ಹೈಸ್ಕೂಲ್ ವಿದ್ಯಾರ್ಥಿನಿ. ಬುಧವಾರ ಶಾಲೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ತೆರಳಿದ್ದಳು. ಆದರೆ ಮನೆಗೆ ಬಾರದೆ ಇದ್ದಾಗ ಮನೆಯವರು ಶಾಲೆ ಅಧ್ಯಾಪಕರನ್ನು ವಿಚಾರಿಸಿದ್ದಾರೆ. ಆಗ ಅಧ್ಯಾಪಕರು ಶಾಲೆಗೆ […]