ಸರಳ ರೀತಿಯಲ್ಲಿ ವಿವಾಹವಾದ ಉಡುಪಿ ಜಿಲ್ಲಾಧಿಕಾರಿ
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಅವರು ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರೊಂದಿಗೆ ಹುಬ್ಬಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೋಮವಾರ ಸರಳ ವಿವಾಹವಾಗಿದ್ದಾರೆ. ಉತ್ತರ ಕನ್ನಡದಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಉಜ್ವಲ್ ಕುಮಾರ್ ಘೋಷ್ ಅವರು ಪ್ರಸ್ತುತ ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ ಹಾಗು ಪುನರ್ವಸತಿ ಆಯುಕ್ತರಾಗಿದ್ದಾರೆ. ಹುಬ್ಬಳ್ಳಿ ಮಿನಿ ವಿಧಾನಸೌದದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ನಡೆಯಿತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೂವತ್ತು ದಿನಗಳ ಹಿಂದೆ ನೋಂದಣಿ […]