ಹೆಮ್ಮಾಡಿ :ಹೆಲ್ಮೆಟ್ ಧರಿಸಿದ್ದರೂ ಧರಿಸಿಲ್ಲ ಎಂದ ಪೊಲೀಸರ ವಿರುದ್ದ ರೊಚ್ಚಿಗೆದ್ದ ಬೈಕ್ ಸವಾರ:

ಕುಂದಾಪುರ: ದಾಖಲೆಗಳೆಲ್ಲಾ ಸರಿಯಿದ್ದರೂ ದಂಡ ವಿಧಿಸಲು ಮುಂದಾದ ಟ್ರಾಫಿಕ್ ಪೊಲೀಸರ ನಡೆಗೆ ಬೈಕ್ ಸವಾರ ಯುವಕನೋರ್ವ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೆಮ್ಮಾಡಿ ಸರ್ಕಲ್ ಬಳಿ ಬುಧವಾರ ಸಂಜೆ ನಡೆದಿದೆ. ಹೆಮ್ಮಾಡಿ ಸರ್ಕಲ್ ಬಳಿಯಲ್ಲಿ ಕುಂದಾಪುರ ಸಂಚಾರಿ ಠಾಣೆಯ ಪಿಎಸ್‌ಐ ಪುಷ್ಪಾ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಹೆಮ್ಮಾಡಿ ಮೀನು ಮಾರುಕಟ್ಟೆ ರಸ್ತೆಯಿಂದ ಬೈಕ್‌ನಲ್ಲಿ ಸಾಗಿ ಬಂದ ಯುವಕನೋರ್ವನ ಬೈಕ್ ಅನ್ನು ಟ್ರಾಫಿಕ್ ಕಾನ್ಸ್‌ಟೇಬಲ್ ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ದಾಖಲೆಗಳು ಸರಿಯಿದ್ದು, ಹೆಲ್ಮೆಟ್ […]