ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡ ಉದ್ಘಾಟನೆ
ಕುಂದಾಪುರ: ಗ್ರಾಮ ಪಂಚಾಯಿತಿ ಸುಂದರ ಕಟ್ಟಡ ಜನರ ಸೌಲಭ್ಯಕ್ಕೆ ಲಭ್ಯವಾಗುತ್ತಿದ್ದು, ಸರ್ಕಾರ ಜನರಿಗಾಗಿ ರೂಪಿಸಿದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಸಾರ್ಥಕತೆ ಪಡೆಯಬೇಕು. ಕಟ್ಟಡ ನೋಡಲು ಸೊಗಸಾಗಿದ್ದರಷ್ಟೆ ಸಾಲದು. ಜನಪರ ಕಾಳಜಿಯಿದ್ದರೆ ಮಾತ್ರ ಕಟ್ಟಡದ ಜೊತೆ ಜನರ ಬದುಕು ಸಂದರವಾಗುತ್ತದೆ ಎಂದು ಕುಂದಾಪುರ ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಭಿಪ್ರಾಯಪಟ್ಟರು. ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ಕೂಡಾ ಉತ್ತಮ ಸೇವೆಯನ್ನು ಸ್ಥಳೀಯಾಡಳಿತದಿಂದ ಪಡೆಯಬೇಕು. ಉತ್ತಮ ಅಭಿವೃದ್ಧಿ ಹಾಗೂ […]