ಹೆಮ್ಮಾಡಿ ಆಟೋ ಚಾಲಕರ ಸಭೆ
ಹೆಮ್ಮಾಡಿ: ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆಟೋ ಚಾಲಕರು ಪೊಲೀಸರಿಗೆ ಸಹಕಾರ ನೀಡಬೇಕು. ಹಗಲಿರುಳು ದುಡಿದು ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಒದಗಿಸುತ್ತಿರುವ ಆಟೋ ಚಾಲಕರ ಕಾರ್ಯ ಶ್ಲಾಘನೀಯವಾದುದು ಎಂದು ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಆರ್ ಮಂಜಪ್ಪ ಹೇಳಿದರು. ಅವರು ಸೋಮವಾರ ಬೆಳಿಗ್ಗೆ ಹೆಮ್ಮಾಡಿ ಆದರ್ಶ ಯುವಕ ಮಂಡಲದಲ್ಲಿ ನಡೆದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದರು. ಅಪಘಾತ ಇನ್ನಿತರ ಘಟನೆಗಳು ನಡೆದಾಗ ಮೊದಲು ಸ್ಪಂದಿಸುವವರು ಆಟೋ ಚಾಲಕರು. ಹೀಗಾಗಿ ಆಟೊ ಚಾಲಕರು ಹಾಗೂ ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ಇರುತ್ತದೆ. […]