ಹೆಬ್ರಿ: ಪ್ರಿಯಕರನಿಂದ ಪೋನ್ ಕರೆ ನಿರಾಕರಣೆ; ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆ

ಕಾರ್ಕಳ: ಪ್ರಿಯಕರ ಪೋನ್ ಕರೆಯನ್ನು ಸ್ವೀಕರಿಸಿಲ್ಲವೆಂದು ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ. ಕುಸುಮಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕುಸುಮಾರವರು ಸಂತೆಕಟ್ಟೆಯಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಯುವಕನನ್ನು ಪ್ರೀತಿಸುತ್ತಿದ್ದರು. ಆತನು ಆಕೆಯ ಪೋನ್ ಕರೆಯನ್ನು ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದೆ ಆತ ತನಗೆ ಸಿಕ್ಕುವುದಿಲ್ಲವೆಂದು ಬೇಸರದಿಂದ ಎ.11 ರಂದು ಬೆಳಿಗ್ಗೆ ವಿಷ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದಾರೆ. ಕುಸುಮಾ ಅವರನ್ನು ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ […]