ಹೆಬ್ರಿ: ಗರ್ಭಿಣಿ ಸಂಶಯಾಸ್ಪದ ಸಾವು; ಪ್ರಕರಣ ದಾಖಲು
ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರ್ಖಂಡ್ ಮೂಲದ ಗರ್ಭಿಣಿ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಪ್ರಕರಣ ದಾಖಲಾಗಿದೆ. ಮೃತರನ್ನು ಜಾರ್ಖಂಡ್ ಮೂಲದ ಬಿಪಿನ್ ಒರಾನ್ ಎಂಬವರ ಪತ್ನಿ ಪ್ರಿಯಾಂಕ ಒರಾನ್(24) ಎಂದು ಗುರುತಿಸಲಾಗಿದೆ. ಇವರು ಹೆಬ್ರಿ ಗ್ರಾಮದ ಬಚ್ಚಪ್ಪು ನೆಕ್ಕರ್ಕೆ ಎಂಬಲ್ಲಿರುವ ಆ್ಯಂಟೋನಿ ಕೆ.ಎ. ಎಂಬವರ ತೋಟದ ಮನೆಯಲ್ಲಿನ ಪಕ್ಕದ ರೂಮಿನಲ್ಲಿ ವಾಸವಾಗಿದ್ದರು. ಪ್ರಿಯಾಂಕ ಸುಮಾರು ಎರಡೂವರೆ ತಿಂಗಳ ಹಿಂದೆ ಇಲ್ಲಿಗೆ ಬಂದು ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಪ್ರಸ್ತುತ ಗರ್ಬಿಣಿ ಯಾಗಿದ್ದಾರೆ. ಇಲ್ಲಿಗೆ ಹೊಸದಾಗಿ ಕೆಲಸಕ್ಕೆ ಬಂದ […]