ಹೆಬ್ರಿ: ಇನ್ನೊವಾ ಕಾರು, ರಿಕ್ಷಾ ನಡುವೆ ಅಪಘಾತ – ಮಹಿಳೆ ಮೃತ್ಯು

ಹೆಬ್ರಿ: ಇನ್ನೊವಾ ಕಾರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ನಾಡ್ತಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿ ನಡೆದಿದೆ. ಮೃತರನ್ನು ಶಾಂತಮ್ಮ (77) ಎಂದು ಗುರುತಿಸಲಾಗಿದೆ. ಹೆಬ್ರಿ ಕಡೆಯಿಂದ ಆಗುಂಬೆ ಕಡೆಗೆ ಹೋಗುತ್ತಿದ್ದ ಕಾರು, ಎದುರಿನಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಓವ‌ಟೇಕ್ ಮಾಡುವ ಭರದಲ್ಲಿ ರಿಕ್ಷಾದ ಬಲಬಾಗಕ್ಕೆ ಢಿಕ್ಕಿ ಹೊಡೆದು ನಂತರ ಎದುರಿನಿಂದ ಬರುತ್ತಿದ್ದ ಸರಕಾರಿ ಬಸ್ಸಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಾಂತಮ್ಮ ತೀವ್ರ ಗಾಯಗೊಂಡು ಹೆಬ್ರಿ ಸರಕಾರಿ […]