ಹೆಬ್ರಿ: ಬೈಕ್ – ಕಾರ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು.

ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಕೆಲಕಿಲ ಸೇತುವೆಯ ಬಳಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಪಳ್ಳಿ ಗ್ರಾಮದ ವಿಶ್ವನಾಥ್ ಎಂಬವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಹೆಬ್ರಿಯಿಂದ ಅಜೆಕಾರ್ ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರು ಬೈಕ್ ಸವಾರರಿಗೆ ಡಿಕ್ಕಿಯಾಗಿದ್ದ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದು, ತೀವ್ರ ಸ್ವರೂಪದ ಗಾಯವಾಗಿದ್ದ ವಿಶ್ವನಾಥ್ ಎಂಬವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.