ಹೆಬ್ರಿ: ಅಣ್ಣನೇ ತನ್ನ ತಮ್ಮನನ್ನು ತಲೆಗೆ ಹೊಡೆದು ಕೊಲೆ ಮಾಡಿರುವ ಶಂಕೆ; ದೂರು ದಾಖಲು
ಹೆಬ್ರಿ: ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೋರ್ವ ತನ್ನ ತಮ್ಮನನ್ನೇ ಹೊಡೆದು ಬಾವಿಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಇನ್ನೋರ್ವ ಸಹೋದರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜ.13ರ ಬೆಳಿಗ್ಗೆ 8 ಗಂಟೆಯಿಂದ ಜ. 14ರ ಬೆಳಿಗ್ಗೆ 9:00 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆ ನಿವಾಸಿ ರವಿರಾಜ್ ಶೆಟ್ಟಿಗಾರ್ ಅವರು ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ನೀರು ತೆಗೆಯಲು ಹೋದಂತಹ ವೇಳೆ ಆಕಸ್ಮಿಕವಾಗಿ […]