ಮಹಾಮಳೆಗೆ ನಲುಗಿದ ಆಂಧ್ರ, ತೆಲಂಗಾಣ: 47 ಮಂದಿ ಸಾವು
ಹೈದರಾಬಾದ್: ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವರ್ಷಾಧರೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್ ಹಾಗೂ ಆಂಧ್ರ ಪ್ರದೇಶದ ವಿವಿಧ ಭಾಗಗಳು ಮುಳುಗಡೆಯಾಗಿವೆ. ಬುಧವಾರ ಸುರಿದ ಭಾರಿ ಮಳೆಗೆ 47 ಜನರು ಮೃತಪಟ್ಟಿದ್ದಾರೆ. ತೆಲಂಗಾಣದಲ್ಲಿ ರಾಜ್ಯದಲ್ಲಿ 32 ಜನರು ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ರಾಜಧಾನಿ ಹೈದಾರಬಾದ್‌ನಲ್ಲೇ 15 ಜನರು ಸಾವನ್ನಪ್ಪಿದ್ದಾರೆ. ಆಂಧ್ರದ ವಿವಿಧ ಭಾಗಗಳಲ್ಲಿ 15 ಜನರು ಮೃತಪಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಮಳೆಯ ಅವಾಂತರ: ಮಹಾಳೆಯಿಂದ ಹೈದರಾಬಾದ್‌ನ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು […]