ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೃದಯಾಘಾತದಿಂದ ನಿಧನ
ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ (65) ಅವರು ಗುರುವಾರ ನಿಧನ ಹೊಂದಿದ್ದಾರೆ. ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದಾಗ ಹೃದಯಾಘಾತವಾಗಿದ್ದು, ಬಸ್ ಮಂಗಳೂರಿನ ನಿಲ್ದಾಣಕ್ಕೆ ತಲುಪಿದಾಗ ನಿಧನರಾಗಿದ್ದರು. ನಿದ್ದೆ ಮಾಡಿದ್ದಾರೆಂದು ಬಸ್ ಕಂಡಕ್ಟರ್ ಕರೆಯುವ ವೇಳೆ ಅವರು ಮೃತಪಟ್ಟಿದ್ದರು. ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದ ಭಂಡಾರಿ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು.