ಆಯುಷ್ಮಾನ್‌ ಭಾರತ್‌ ನ ನಿಯಮಾವಳಿಗಳಲ್ಲಿ ಇರುವ ಗೊಂದಲ ಬಗೆಹರಿಸುವೆ:ಸಚಿವ ಶ್ರೀರಾಮುಲು ಭರವಸೆ

ಕುಂದಾಪುರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾ  ಆಯುಷ್ಮಾನ್‌ ಭಾರತ್‌ ನ ನಿಯಮಾವಳಿಗಳಲ್ಲಿ ಇರುವ ಗೊಂದಲಗಳಿಂದಾಗಿ ಒಳ್ಳೆಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳಿಗೆ ತೊಂದರೆಗಳಾಗುತ್ತಿದೆ ಎನ್ನುವುದನ್ನು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ರಘುಪತಿ ಭಟ್‌ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆಗಳನ್ನು ಬಗೆ ಹರಿಸಿ ಯೋಜನೆಯ ಪ್ರತಿಫಲ ಎಲ್ಲರಿಗೂ ಸರಳ ರೀತಿಯಲ್ಲಿ ದೊರಕಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಭರವಸೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸರ್ಕಾರಿ […]