ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
ಕಟಪಾಡಿ: ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಇದರ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿ.17 ರಂದು ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಜರಗಿತು. ಹೈಟೆಕ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಟಿ ಎಸ್ ರಾವ್, ಆಸ್ಪತ್ರೆಯ ಇ.ಎನ್.ಟಿ ತಜ್ಞ ಡಾ.ತೇಜಸ್ವಿ ತುಂಗಪಿಂಡಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಶರತ್ ಚಂದ್ರ ರಾವ್ ರೋಗಿಗಳ ತಪಾಸಣೆ ನಡೆಸಿದರು. ನೂರಾರು ಜನ ಶಿಬಿರದ ಸೌಲಭ್ಯ ಪಡೆದುಕೊಂಡರು. […]