ನಿದ್ರಾಹೀನತೆ ನಿಮ್ಮನ್ನು ಬಾಧಿಸುತ್ತಿದೆಯೆ? ಇಲ್ಲಿವೆ ಸುಖ ನಿದ್ದೆಗೆ ಜಾರಲು ಸುಲಭ ಸೂತ್ರಗಳು
ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯು ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ತಂತ್ರಜ್ಞಾನದ ಅತಿಯಾದ ಬಳಕೆ, ಒತ್ತಡ ಭರಿತ ಜೀವನ, ಕುಡಿತ ಮತ್ತಿತರ ದುರಾಭ್ಯಾಸಗಳಿಂದಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕೆಡಿಸಿಕೊಳ್ಳುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯವಂತ ದೇಹಕ್ಕೆ ಪೋಷಕಾಂಶಯುಕ್ತ ಆಹಾರ ಎಷ್ಟು ಮುಖ್ಯವೋ ಆರೋಗ್ಯವಂತ ಮನಸ್ಸಿಗೆ ಗಡದ್ದಾದ ನಿದ್ದೆಯೂ ಅಷ್ಟೇ ಮುಖ್ಯ ಎನ್ನುವುದನ್ನು ಆಯುರ್ವೇದ ಕೂಡಾ ಹೇಳುತ್ತದೆ. ಸುಲಭವಾಗಿ ನಿದ್ದೆಗೆ ಜಾರಲು ಮಂತ್ರದಂಡದ ಪರಿಹಾರೋಪಾಯಗಳು ಇಲ್ಲದಿದ್ದರೂ, ದೈನಂದಿನ ದಿನಚರಿಯನ್ನು ಶಿಸ್ತುಬದ್ದವಾಗಿಸಿಕೊಳ್ಳುವ ಮೂಲಕ ನೆಮ್ಮದಿಯ ನಿದ್ದೆಯನ್ನು […]